ಬುಲಿನ್, ಆನ್
1507-36. ಇಂಗ್ಲೆಂಡಿನ ದೊರೆಯಾಗಿದ್ದ 8ನೆಯ ಹೆನ್ರಿಯ ದ್ವಿತೀಯ ಪತ್ನಿ. ತಾಮಸ್ ಬುಲೀನನ ಮಗಳು. ಫ್ರಾನ್ಸಿನ ರಾಣಿ ಕ್ಲಾಡಳ ಸೇವೆಯಲ್ಲಿದ್ದಳು. 1527ರಲ್ಲಿ ಹೆನ್ರಿಯ ಉಪ ಪತ್ನಿಯಾದಳು. 1533ರಲ್ಲಿ ಅವನೊಂದಿಗೆ ರಹಸ್ಯವಾಗಿ ಈಕೆಯ ಮದುವೆಯಾಯಿತು. ಆಗ ಅರಗಾನಿನ ಕ್ಯಾದರಿನಳೊಂದಿಗೆ ಹೆನ್ರಿ ಮಾಡಿಕೊಂಡಿದ್ದ ವಿವಾಹವನ್ನು ಆಚ್ ್ಬಿಷಪ್ ಕ್ರಾನ್ ಮರ್ ರದ್ದು ಮಾಡಿದ. 1533ರಲ್ಲಿ ಇವಳು ಮುಂದೆ 1ನೆಯ ಎಲಿಜಬೆತ್ ರಾಣಿಯಾಗಲಿದ್ದ ಶಿಶುವಿಗೆ ಜನ್ಮವಿತ್ತಳು. ಅನೇಕ ಪ್ರೇಮಿಗಳೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳೆಂಬ ಆಪಾದನೆಯ ಮೇಲೆ 26 ಶ್ರೀಮಂತರ (ಪಿಯರ್) ಸಭೆ ಈಕೆಗೆ ಮರಣಶಿಕ್ಷೆ ವಿಧಿಸಿತು. ಈಕೆಯ ತಲೆಯನ್ನು ಕಡಿಯಲಾಯಿತು.  								
(ಎಚ್.ಜಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ